March 23, 2019

ಗೋಪಾಲ ಮುತ್ಯಾ, ಬಾಗಲಕೋಟೆಯ ದ್ಯೆವ ಪುರುಷರಾದ ಲಡ್ಡು ಮುತ್ಯಾರವರು 🚩 ನೆಡೆದಾಡುವ ದೇವರು 🚩

ಮಹಾರಾಷ್ಟ್ತ್ರದ ಮೂಲದಿಂದ ಬಂದ ಈ ಅಜ್ಜನ ಹೆಸರು, ಜಾತಿ, ಯಾರಿಗೂ ಗೊತ್ತಿಲ್ಲ. ಇಳೆ ವಯಸ್ಸಿನಲ್ಲಿ ಬಂದು ಗ್ರಾಮ ಸೇರಿದ ಅಜ್ಜ, ಯಾರಿಗೂ ಗೋತ್ತಿಲ್ಲದ್ದರಿಂದ ಅಜ್ಜನನ್ನು ಗ್ರಾಮಸ್ಥರು ಗೋಪಾಲ ಎಂದು ಕರೆಯಲು ಆರಂಭಿಸಿದರು ಎಂದು ಗ್ರಾಮದ ಮಲ್ಲಿಕಾರ್ಜುನ ಭಗವತಿ, ಸಂಗಯ್ಯಮಠ ಹೇಳುತ್ತಾರೆ. ಯಾರೊಂದಿಗೂ ಹೆಚ್ಚು ಮಾತನಾಡದ ಗೋಪಾಲ ಮುತ್ಯಾ ಸದಾ ಹಸನ್ಮುಖಿಯಾಗಿರುತ್ತಿದ್ದನು ಹಾಗೂ ಊಟ-ಉಪಚಾರಗಳ ಬಗ್ಗೆ ಅಜ್ಜನಿಗೆ ಇಷ್ಟವೇ ಇರಲ್ಲಿಲ್ಲ. ಬೇಕು ಎನಸಿದೆ ತಿನ್ನುವುದು, ಇಲ್ಲವಾದರೆ ಇಲ್ಲ ಯಾರಾದರೂ ಈತನ ಹೆಸರು ಪರಿಚಯ ಕೇಳಿದರೆ ಆಕಾಶದ ಕಡೆಗೆ ಮುಖ ಮಾಡಿ ರೈಲಿನ ತರಹ ಕೂಗುತ್ತಿದ್ದನು ಎಂದು ಜನರು ಹೇಳುತ್ತಾರೆ. ಈತನ ವಿಚಿತ್ರ ನಡುವಳಿಕೆಗಳೇ ಹಲವು ಪವಾಡಗಳಿಗೆ ಕಾರಣವಾಗಿ ಜನರಲ್ಲಿ ಭಕ್ತಿಯ ಮೊಳಕೆಯೊಡೆಯುವಂತಾಯಿತು.  ಸ್ತ್ತ್ರೀಯರನ್ನು ಅವ್ವ ಎಂದು ಹಾಗೂ ಪುರುಷರನ್ನು ಅಪ್ಪ ಎಂದು ಸಂಭೋಧಿಸುತ್ತಿದ್ದ ಮುತ್ಯಾ, ಸದಾ ಊರಿನ ಒಳಿತು ಬಯಸುತ್ತಿದ್ದ. 1971-72ನೇ ಸಾಲಿನಲ್ಲಿ ತೀವ್ರ ಬರಗಾಲ ಎದುರಾದಾಗ ಗೋಪಾಲ ಮುತ್ಯಾ ಗ್ರಾಮದ ಹೊರವಲಯದಲ್ಲಿರುವ ಬೆಟ್ಟದಲ್ಲಿ 8 ದಿನಗಳ ಕಾಲ ಸತತ ಒಂಟಿ ಗಾಲಿನಲ್ಲಿ ನಂತು ಆಕಾಶದೆಡೆ ಮುಖ  ಮಾಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದ ಮುತ್ಯಾನ ನಿಷ್ಕಲ್ಮಶ ಭಕ್ತಿಗೆ ಧಾರಾಕಾರ ಮಳೆ ಸುರಿಯಿತು. ಆಗ ಮುತ್ಯಾನ ಪವಾಡಕ್ಕೆ ಮಾರುಹೋದ ಗ್ರಾಮದ ಜನತೆ ಗೋಪಾಲ ಅಜ್ಜನನ್ನು ಪಲ್ಲಕ್ಕಿ ಮೇಲೆ ಕೂಡಿಸಿ ಗ್ರಾಮದ ತುಂಬ ಮೆರವಣಿಗೆ ಮಾಡಲಾಯಿತು ಎಂದು ಗ್ರಾಮದ ಹಸನ್ ಸಾಬ್ ದಾವಲನಾಯಕ, ಚನ್ನಪ್ಪ ರಾಜನಾಳ, ಈರಪ್ಪ ಹಂಚಿನಾಳ ಗೋಪಾಲ ಅಜ್ಜನ ಪವಾಡವನ್ನು ಸ್ಮರಿಸಿಕೊಳ್ಳುತ್ತಾರೆ. ತಿಂಗಳುಗಳ ಕಾಲ ಧ್ಯಾನಾಸಕ್ತನಾಗುತ್ತಿದ್ದ ಗೋಪಾಲ ಮುತ್ಯಾ, ಯಾವ ಮಠ-ಮಾನ್ಯಗಳ ಹಿನ್ನಲೆ ಹೊಂದಿರಲಿಲ್ಲ.

No comments:

Post a Comment

ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು,

  ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು. ಶ್ರೀ ವೀರೇಶ್ವರ ಸ್ವಾಮಿಗಳು ಧಾರವಾಡ ಜಿಲ್ಲೆಯ   ಕುಂದಗೋಳ ತಾಲ್ಲೂಕಿನ ಗಳಗಿ ಗ್ರಾಮದವರು   ಹಾಗೂ ಇಂಗಳಗಿ ಮಠಪತಿ ...