May 21, 2019
May 16, 2019
Lakkasandra Rayaru ಲಕ್ಕಸಂದ್ರ ರಾಯರು
Shri Poojya Guru Rayaru
Sri Guru Rayaru is a great avadhuta living in Lakkasandra about 3 kms north of Ghati Subramanya near Bangalore. He was born in Feb 1942, in town called Gubbi in Karnataka. He did Tapasya for 23 long years in Bangalore and various other places. From his early years he has been a precious child, he was not knowing to talk and virtually silent for many years after birth. In this ascepct he has similarity to the great Namma Alwar of Tiru Nagari of the south.
He moved to Lakkasandra in 1970’s into a small dwelling unit and worshiped Raghavendra Brindavan (Mruttika). Many devotees and disciples came around over a period of time and built an imosing structure for Raghavendra Brindavanam. Many holy places and many times he frequented Mantralayam of Raghavendra Swamy. He has been a great devotee of mantralaya Raghavendra Swamy. He call Guru Raghavendra as ‘appa’ meaning father, his divine father.
Sri Guru Rayaru blessed many people and guided several hundred of devotees when ever they were in difficulties in life. He blessed many families by granting them devotion and providing them comfort and ‘Atma Stharya’. He insprired people to render serevice to humanity. He established an order where anna dana (offering food to all devotees who visit him at Lakkasandra. His kitchen runs round the clock and food is served at any time of the day or night and many pious men and holy men visit them. He is very reverential to holy people and sadhus (monks and sanyasis) In later years he wished his devotees to render medical service to the sick and the poor. In reverance to his wish a charitable trust is regesterd and established with 21 devotees. The guiding principle is to serve as Narayana Swarupis. The Trust is called Sadguru Arogya Research Foundation Trust (SARFT). This Trust adopted a medical centre with qualified doctors in Dodballapur promoting Ayurvedic system of medicine.emple Devotees of Vedavyas Bharati Trust along with devotees of Guru Rayaru together built a Temple for Panchamukhi Anjaneya at Lakkasandra.
Sri Guru Rayaru was familiar with Sri Vedavyas Guruji’s life works and his writings. Though both did not meet in person, Sri Guru Rayaru has an inner feeling that he had been very close to him. He guided his team of disciples in and around Bangalore to fulfil Shri Vedavyas Guruji’s wish to establish University of Vedic Sciences. To this effect he guided the devotees to a place in mid way to Bangalore and Tirupati. After the land was purchased he performed the Bhumi pooja himself for the Rishi Vatika main block. In two years time during the Kartika Poornima day in 2013 he inagurated the Rishi Vatika main Ashram Block. He also visited and blessed the devotees during his vist to Vedavyasa & Sapta Rishi Temple.
ಮಲ್ಲಾಡಿಹಳ್ಳಿಯ ‘ತಿರುಕ’, ಅಭಿನವ ಧನ್ವಂತರಿ
ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಮಲ್ಲಾಡಿಹಳ್ಳಿ ಸ್ವಾಮಿಗಳೆಂದೇ ಖ್ಯಾತನಾಮರು. ‘ತಿರುಕ’ ಇವರ ಕಾವ್ಯನಾಮ. ಸದಾ ಶ್ವೇತವಸ್ತ್ರಧಾರಿಗಳಾಗಿ, ಹಸನ್ಮುಖರಾಗಿದ್ದವರು. ಎಲ್ಲರಿಗೂ ಯೋಗವನ್ನು ಹೇಳಿಕೊಟ್ಟು ಅವರ ರೋಗಗಳನ್ನು ನಿವಾರಿಸಿದರು. ಒಂದು ವಾಸ್ತವ ಸಂಗತಿಯೆಂದರೆ ತಮ್ಮನ್ನು ಕಾಡುತ್ತಿದ್ದ ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ಇವರು ಯೋಗಕ್ಕೆ ಮೊರೆಹೋದರು. ನಿರಂತರ ಯೋಗಾಭ್ಯಾಸದಿಂದಾಗಿ ಅವರ ಅನೇಕ ಕಾಯಿಲೆಗಳು ದೂರವಾದವು. ಅವರ ಶಿಸ್ತುಬದ್ಧ ಯೋಗಾಸನಗಳೇ ಅವರ ಆರೋಗ್ಯದ ಗುಟ್ಟು; ಶತಾಯುಷಕ್ಕೆ ಕಾರಣ. ಮಲ್ಲಾಡಿಹಳ್ಳಿಯಲ್ಲಿ ಅನಾಥ ಸೇವಾಶ್ರಮವನ್ನೂ ಸ್ಥಾಪಿಸಿದರು. ಜನರಿಂದ ‘ಸ್ವಾಮೀಜಿ’ ಎಂದು ಕರೆಸಿಕೊಂಡ ಇವರು ನಾವು ಕಾಣುವ ಇತರ ಸ್ವಾಮೀಜಿಗಳಂತಲ್ಲ. ಕಾವಿ ಧರಿಸಲಿಲ್ಲ. ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿ ತಮ್ಮ ಶಿಷ್ಯರೊಡಗೂಡಿ ದುಡಿಮೆ ಮಾಡುತ್ತಿದ್ದರು. ಕಟ್ಟುನಿಟ್ಟಿನ ದಿನಚರಿಯ, ಶಿಸ್ತಿನ ಸಿಪಾಯಿಗಳಾದ ಇವರದು ಸರಳ ಜೀವನ. ಸೇವೆಗಾಗಿನ ಬದುಕು.
ಮಲ್ಲಾಡಿಹಳ್ಳಿ ಸ್ವಾಮಿಗಳು ಜನಿಸಿದ ದಿನ 18.03.1891. ಮೂಲತಃ ಕೇರಳದಲ್ಲಿ ಹುಟ್ಟಿದರೂ ಮಲ್ಲಾಡಿಹಳ್ಳಿ ಸ್ವಾಮಿಗಳು ತಮ್ಮ ಸಂಬಂಧವನ್ನು ಮಲ್ಲಾಡಿಹಳ್ಳಿಯಲ್ಲಿ ಮಿಳಿತಗೊಳಿಸಿ, ಕನ್ನಡ ನೆಲದ ಮಣ್ಣಿನ ಮಗನಾದರು. 106 ವರ್ಷಗಳ ಕಾಲ ಸುದೀರ್ಘವಾಗಿ ಬದುಕಿ, ಅನೇಕರನ್ನು ತಮ್ಮ ಮಾರ್ಗದರ್ಶನದಿಂದ ಬದುಕಿಸಿದ ಮಲ್ಲಾಡಿಹಳ್ಳಿಯ ಈ ಸ್ವಾಮಿಗಳು 1996ರಲ್ಲಿ ಬೆಂಗಳೂರಿನಲ್ಲಿ ತಮ್ಮ ಲೌಕಿಕದ ವ್ಯಾಪಾರವನ್ನು ಮುಗಿಸಿದರು.
ಮಲ್ಲಾಡಿಹಳ್ಳಿ ಸ್ವಾಮಿಗಳು ಒಬ್ಬ ಮಹಾಸಾಧಕರು, ತಪಸ್ವಿಗಳು, ಪರಮಯೊಗಾಚಾಅರ್ಯರು, ಮಹಾಸಂಘಟಕರು, ಸಾರ್ಥಕ ಬದುಕಿನ ನಿಷ್ಕಾಮ ಕರ್ಮಯೋಗಿ. ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು. ‘ಅಭಿನವ ಧನ್ವಂತರಿ’ಯೆಂದೇ ಜನಪ್ರಿಯರು. ಚಿತ್ರದುರ್ಗ ಜಿಲ್ಲೆಯ ‘ಹೊಳಲ್ಕೆರೆ ತಾಲ್ಲೂಕಿರುವ – ಮಲ್ಲಾಡಿಹಳ್ಳಿಗೆ ಅವರು ಬಂದದ್ದು, ಅಲ್ಲಿನ ಜನರ ಪಾಲಿಗೆ ವರದಾನವಾಯಿತು. ತಮ್ಮ ಗುರು ‘ಶಿವಾನಂದ’ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ‘ಪೂಜೆ’ಯಾಗಿ ಸ್ವೀಕರಿಸಿ, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. 1943ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು.
ಮಲ್ಲಾಡಿಹಳ್ಳಿ ಸ್ವಾಮಿಗಳವರ ತಂದೆ ಅನಂತ ಪದ್ಮನಾಭ ನಂಬೂದರಿ, ಮೂಲತಃ ಕೇರಳದ ಜ್ಯೋತಿಷ್ಯ ವಿದ್ವಾಂಸರು, ಮಹಾಪಂಡಿತರು; ತಮ್ಮ ಬಳಿಗೆ ಬರುತ್ತಿದ್ದ ಜನಗಳ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ‘ಪದ್ಮಾಂಬಾಳ್’ ಅವರ ತಾಯಿ, ಮಹಾಸಾಧ್ವಿ. ಅವರಿಗೆ ಜನಿಸಿದ ಮಗುವಿನ ಹೆಸರು ‘ಕುಮಾರಸ್ವಾಮಿ’ ಎಂದು. ಹುಟ್ಟಿದಾಗಲೇ ಆ ಶಿಶು, ‘ಬಾಲರೋಗ’ಕ್ಕೆ ತುತ್ತಾಯಿತು. ಸುಮಾರು 14 ವರ್ಷ, ಯಾವ ಭಾವನೆಯನ್ನೂ ಅನುಭವಿಸದ, ಆ ಪ್ರಜ್ಞಾಶೂನ್ಯ ಮಗುವಿನ ಮಾತೆ, ದೂರದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಸೇವಾರ್ಥವಾಗಿ ಕರೆದೊಯ್ಯುತ್ತಾರೆ. ಪದ್ಮಾಂಬ ಹಾಗೂ ನಂಬೂದರಿಯವರು ನಿಶ್ಯಕ್ತಿ, ವೃದ್ಧಾಪ್ಯ ಹಾಗೂ ರೋಗಗಳಿಂದ ಬೆಂಡಾಗಿ ಹೋಗಿದ್ದರು. ಆದರೂ 14 ವರ್ಷದ ಮಗನನ್ನು ಎತ್ತಿಕೊಂಡೇ ಕಾಡಿನ ದುರ್ಗಮ ಹಾದಿಯಲ್ಲಿ ಅವರ ‘ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಯಾತ್ರೆ’ ಸಾಗಿತ್ತು. ದಕ್ಷಿಣ ಕನ್ನಡದ ಬಾರಕೂರು ಎಂಬ ಗ್ರಾಮಕ್ಕೆ ಬಂದು, ಶ್ರೀ ನರಸಿಂಹಯ್ಯನವರ ಮನೆಯಲ್ಲಿ ತಂಗಿದರು.
ಅದೇ ಸಮಯಕ್ಕೆ ಮಂತ್ರಾಲಯದ ಅಂದಿನ ಮಠಾಧಿಪತಿಗಳು, ಬಾರಕೂರಿನಲ್ಲಿ ಬಿಡಾರಮಾಡಿದ್ದು ಈ ಬಾಲಕನಿಗೆ ಆಶೀರ್ವದಿಸಿ ಅನುಗ್ರಹಿಸಿದ ಮೇಲೆ, ತಾಯಿ ಪದ್ಮಾಂಬಾಳ್ ಅವರಿಗೆ ಸ್ವಲ್ಪ ಸಮಾಧಾನವಾಯಿತು. ಮಂತ್ರಾಲಯದ ಯತಿಗಳು ಆ ಬಾಲಕನನ್ನು ‘ರಾಘವೇಂದ್ರ’ ಎಂದು ಕರೆದರು. ಅಷ್ಟು ಹೊತ್ತಿಗೆ ಪದ್ಮಾಂಬಾಳ್ ಅವರ ಆರೋಗ್ಯ ತೀರ ಹದಗೆಟ್ಟಿದ್ದು, ಅವರು ಪ್ರಯಾಣ ಮುಂದುವರೆಸಲು ಸಾಧ್ಯವಾಗದೆ, ಮಗನ ಈ ಸ್ಥಿತಿಯನ್ನು ನೋಡಲಾರದೆ ಕೊರಗುತ್ತಾ ಬಾರಕೂರಿನಲ್ಲೆ ಅಸುನೀಗಿದರು. ನಂಬೂದರಿಯವರು ಆ ಬಾಲಕನನ್ನು ಗೆಳೆಯ ಭಿರ್ತಿಯ ರಾಮಚಂದ್ರಶಾಸ್ತ್ರಿಗಳ ಸಲಹೆಯಂತೆ ಯಕ್ಷಗಾನ ಪಂಡಿತ, ವಾಗ್ಮಿ, ರಾಮಾಯಣ ಮಹಾಭಾರತ ವ್ಯಾಖ್ಯಾನಕಾರ ನರಸಿಂಹಯ್ಯ ಮತ್ತು ಅವರ ಮಡದಿ ಪುತ್ಥಲೀಬಾಯಿಗೆ ಕ್ರಿ.ಶ. 1906ರ ಯುಗಾದಿಯಂದು ಒಪ್ಪಿಸಿ ತಾವು ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟರು.
ಕುಮಾರಸ್ವಾಮಿಯ ಪಾಲನೆ-ಪೋಷಣೆಯಲ್ಲಿ ತಮ್ಮ ಸರ್ವಸ್ವ ತ್ಯಾಗಮಾಡಿ ತಮ್ಮ ಮಾತೃಪ್ರೇಮದ ಅಮೃತವರ್ಷದಿಂದ ಪುತ್ಥಲೀಬಾಯಿ ಅವನಲ್ಲಿ ಗಮನಾರ್ಹ ಬದಲಾವಣೆ ಮೂಡಿಸಿದರು. ದಿನ ಕಳೆದಂತೆ ಹುಡುಗನಲ್ಲಿ ಪವಾಡಸದೃಶ ಬದಲಾವಣೆ ಉಂಟಾಯಿತು. ಕೆಲವೇ ತಿಂಗಳುಗಳಲ್ಲಿ ಎಲ್ಲರಂತಾಗಿದ್ದ.
ರಾಘವೇಂದ್ರರ ಜೀವನದಲ್ಲಿ ಹೊಸ ತಿರುವನ್ನು ಕೊಡುವಲ್ಲಿ ನೆರವಾದವರಲ್ಲಿ, ಅವರ ಬಾಲ್ಯದ ಗುರುಗಳಾದ, ಶಿವರಾಮಯ್ಯ, ‘ತಾರಕಮಂತ್ರ’ ಉಪದೇಶಿಸಿದ ನಿತ್ಯಾನಂದಸ್ವಾಮಿ, ರಂಗನಾಥಭಟ್ಟರು, ವರೂಢದ ಶಿವಾನಂದ ಶ್ರೀಗಳು, ಬರೋಡದ ಪ್ರೊ. ಮಾಣಿಕ್ಯರಾವ್, ಪಳನಿಸ್ವಾಮಿ ಬಹಳ ಮುಖ್ಯರು. ತಾರಕಮಂತ್ರ (ಶಕ್ತಿಪಾತ ಯೋಗ)ವನ್ನು ಉಪದೇಶಿಸುವಾಗ, ಸ್ವಾಮಿ ನಿತ್ಯಾನಂದರು, ರಾಘವರ ಮಸ್ತಕದ ಮೇಲೆ ತಮ್ಮ ಕೈ ಇಟ್ಟರು. ಅನೇಕ ಯೋಗಿವರ್ಯರೂ ಅವರಿಗೆ ಬೋಧಿಸಿದರು. ‘ದೇವರು’ ಎಂಬ ಸ್ಪಷ್ಟ ಕಲ್ಪನೆಯನ್ನು ಮೊದಲು ಅವರಲ್ಲಿ ಮೂಡಿಸಿದವರು ಯತಿವರ್ಯ ಸ್ವಾಮಿ ಶಿವಾನಂದರು. ರೋಗಿಗಳಲ್ಲಿ, ದೀನರಲ್ಲಿ, ಆರ್ತರಲ್ಲಿ ಕೂಡ ದೈವವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು, ದೇವರು – ಎಂಬುದು ಒಂದು ದೃಷ್ಟಿಕೋನ – ಇಡೀ ಜಗತ್ತನ್ನು ದೈವವೆಂದು ಪರಿಭಾವಿಸಲು ಭಾವಶುದ್ಧಿ ಬೆಳೆಸಿಕೊಳ್ಳಬೇಕಾಗುತ್ತದೆ ಎಂಬುದರ ಅರಿವು ಅವರಿಗಾಗಿತ್ತು.
ರಾಘವೇಂದ್ರರ ಪ್ರೌಢಶಾಲೆಯ ಪದವಿಪೂರ್ವ ವಿದ್ಯಾಭ್ಯಾಸ ಕುಂದಾಪುರದಲ್ಲಾಯಿತು. ಅವರು ಬರೋಡದಲ್ಲಿ ಕಲಿಯುಗದ ಭೀಷ್ಮರೆಂದೇ ಪ್ರಖ್ಯಾತರಾದ, 130 ವರ್ಷ ಬದುಕಿದ್ದ ಜುಮ್ಕಾದಾದಾರವರ ಶಿಷ್ಯ ಬಾಲಬ್ರಹ್ಮಚಾರಿ, ಪ್ರೊಫೆಸರ್ ಮಾಣಿಕ್ಯರಾಯರು ಸ್ಥಾಪಿಸಿದ್ದ ಸುಪ್ರಸಿದ್ಧ ಜುಮ್ಕಾದಾದಾ ವ್ಯಾಯಾಮಶಾಲೆಯಲ್ಲಿ ಶಬ್ಧವೇಧಿ ಕಲೆಯನ್ನು ಕಲಿತರು. ಅಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಲಾಹೋರಿನ ವೈದ್ಯಶ್ರೇಷ್ಠರಾದ, ‘ಆಚಾರ್ಯ ಬಾಬಾ ಲಕ್ಷ್ಮಣದಾಸ’ ಅವರ ಸಮ್ಮುಖದಲ್ಲಿ ಪದವಿ ಪಡೆದರು. ಇದಕ್ಕೆ ಮೊದಲು ಲಕ್ಷ್ಮಣದಾಸ್ ಅವರ ಕೈವಲ್ಯಧಾಮ ಆಶ್ರಮದಲ್ಲಿ ಆಯುರ್ವೇದ, ಸಿದ್ಧವಿದ್ಯೆ, ಅಸ್ತಿ ಸಂಧಾನ ಕಲೆ, ಯುನಾನಿ ವೈದ್ಯ ಪದ್ಧತಿ ಕಲಿತರು. ಲಾಹೋರಿಗೆ ಹೋಗುವ ಮೊದಲೇ ಅವರಿಗೆ 368 ಆಸನಗಳ ಪರಿಪೂರ್ಣ ಜ್ಞಾನಾಭ್ಯಾಸವಿತ್ತು. ಸೂರ್ಯನಮಸ್ಕಾರಗಳು, ಯೋಗಾಸನಗಳು, ಪ್ರಾಣಾಯಾಮ ಮುಂತಾದ ಆತ್ಮವಿದ್ಯೆಯನ್ನು ಬೋಧಿಸುವ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಟ್ಟಾರೆ, ಯೋಗವಿದ್ಯೆಯಲ್ಲಿ ನಿಷ್ಣಾತರಾದರು. ರಾಘವೇಂದ್ರರಲ್ಲಿ ದಿವ್ಯ ತೇಜಸ್ಸು ಇತ್ತು. ಯೋಗಾಭ್ಯಾಸದಿಂದ ಆದ ವಜ್ರಕಾಯಿಯಾಗಿದ್ದರು. ಅವರ ಅಂಗಸೌಷ್ಟವ, ಶರೀರದ ಆಕೃತಿ, ಶಿಲ್ಪಿಗಳಿಗೂ, ಶಿಲ್ಪಚಿತ್ರಕಾರರಿಗೂ ಪ್ರೇರಣೆ ನೀಡುವಂತಿತ್ತು.
ಭಟ್ಕಳದಲ್ಲಿ ಮಾರುತಿ ವ್ಯಾಯಾಮಶಾಲೆ ಉದ್ಘಾಟಿಸಿದರು. ರಾಘವೇಂದ್ರರು ಸ್ಥಾಪಿಸಿದ ‘ಅನಾಥ ಸೇವಾಶ್ರಮ’ ಅನಾಥರಿಗೆ, ಬಡಮಕ್ಕಳಿಗೆ, ಒಂದು ‘ಸೇವಾಕುಟೀರ’ವಾಗಿ ಬೆಳೆಯಿತು. ಅವರ ಶಿಷ್ಯ ‘ಸೂರದಾಸ ಜೀ’ (ಪೂರ್ವಾಶ್ರಮದಲ್ಲಿ ಸೂರ್ಯನಾರಾಯಣ) ಅವರೊಡಗೂಡಿ ಅನಾಥಸೇವಾಶ್ರಮದ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದರು.
ತಂತ್ರ ಯೋಗಶಾಸ್ತ್ರದ ‘ಅಷ್ಟಾಂಗ ಯೋಗ’ಗಳನ್ನು ಆಸಕ್ತರಿಗೆ, ಆಸ್ತಿಕರಿಗೆ ತಿಳಿಯಹೇಳಿದರು.
ಪ್ರತೀವರ್ಷವೂ ಶ್ರಾವಣಮಾಸದಲ್ಲಿ ಒಂದು ತಿಂಗಳು ‘ಮೌನವ್ರತ’ ಧಾರಣೆಮಾಡುತ್ತಿದ್ದರು.
ಮಲ್ಲಾಡಿಹಳ್ಳಿಯ ಸ್ವಾಮಿಗಳು ಅನೇಕ ಅತ್ಯಮೂಲ್ಯ ಪುಸ್ತಕಗಳನ್ನು ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ. 4 ಕಾವ್ಯಗಳು, 9 ಕಾದಂಬರಿಗಳು, 12 ನಾಟಕಗಳು, 2 ಗೀತ ನಾಟಕ, 7 ಏಕಪಾತ್ರಾಭಿನಯ, 1 ವಚನ ಸಾಹಿತ್ಯ 3 ಕಥಾ ಸಂಕಲನ, 4 ಆಯುರ್ವೇದ, 4 ಯೋಗ (ಇದರಲ್ಲಿ “ಬೃಹತ್ ಯೋಗ ದರ್ಶನ” ಯೋಗ ಸಂಪುಟವೂ ಇದೆ) 5 ವ್ಯಾಯಾಮ, 2 ಇತರೆ 1 ಆತ್ಮ ನಿವೇದನೆ 3 ಜೋಳಿಗೆ ಪವಾಡ – ಇದು ರಾಘವೇಂದ್ರರ ಆತ್ಮಚರಿತ್ರೆ.
ಕರ್ನಾಟಕ ಸರ್ಕಾರ, ಇವರನ್ನು ಸನ್ಮಾನಿಸಲು ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳ ಬಗ್ಗೆ ಬಹಳ ಸಾರಿ ಪ್ರಸ್ತಾಪಿಸಿದಾಗ ಅವರ ಉತ್ತರ, “ಅವೆಲ್ಲಾ ನನಗೆ ಬೇಡ; ಆಶ್ರಮದ ಚಟುವಟಿಕೆಗಳಿಗೆ ಹಣದ ಕೊರತೆ ಇದೆ. ಅದನ್ನು ಕೊಡಿ”. ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಬಗ್ಗೆ ತಿಳಿಸಿದಾಗಲೂ ಅವರ ನಿಲುವು ಬದಲಾಗಲಿಲ್ಲ. ಆಶ್ರಮದ ಎಲ್ಲ ಖರ್ಚುಗಳಿಗೂ ಅವರು ದಾನಿಗಳ ಸಹಾಯ ಪಡೆಯಬೇಕಾಗಿತ್ತು. ಯಾವ ನಿರಂತರ ಧನದ ವ್ಯವಸ್ಥೆಯೂ ಇರಲಿಲ್ಲ. ಅವರು ಬರೆದ ಅನೇಕ ಪುಸ್ತಕಗಳ ಮಾರಾಟದಿಂದ ಬಂದರೆ ಅಲ್ಪಸ್ವಲ್ಪ ಹಣ ಅವರ ಸರ್ವೋದಯ ಮುದ್ರಣಾಲಯದಿಂದ ಬರುತ್ತಿತ್ತು. ತಮ್ಮ ಜೋಳಿಗೆ ತಗಲುಹಾಕಿಕೊಂಡು ಭಿಕ್ಷೆಗೆ ಹೋಗುತ್ತಿದ್ದರು.
1991ರಲ್ಲಿ ರಾಘವೇಂದ್ರರ 100ನೇ ಹುಟ್ಟಿದ ಹಬ್ಬವನ್ನು ಊರಿನ ಜನ ಹಾಗೂ ಆಶ್ರಮದ ಹಿತೈಷಿಗಳು ಆಚರಿಸಿದರು. ಆ ಸಮಯದಲ್ಲಿ ಅವರು ಬರೆದ ಪುಟ್ಟ ಪುಸ್ತಕ ‘ಆತ್ಮ ನಿವೇದನೆ’ ಹೊರಗೆ ಬಂತು. ಆತ್ಮಚರಿತ್ರೆ, ‘ಜೋಳಿಗೆಯ ಪವಾಡ’ ಬರೆದರು. ಆಗಲೇ ಹೃದಯಾಘಾತದಿಂದ ನರಳಿದ್ದರು. ಪುನಃ 1996ರಲ್ಲಿ ಅವರಿಗೆ ಮತ್ತೆ ‘ಹೃದಯಾಘಾತವಾಯಿತು.
ತಿಂಗಳ ಮೇಲೆ ‘ಕೋಮಾ’ದಲ್ಲಿದ್ದ ಅವರಿಗೆ ಮತ್ತೆ ಪ್ರಜ್ಞೆ ಬರಲೇ ಇಲ್ಲ. ‘ಬುತ್ತಿ ಗಂಟು ತೀರಿತಿನ್ನು, ಹೊರಟೆ ನನ್ನ ಊರಿಗೆ’ ಎನ್ನುತ್ತಾ ಆಗಸ್ಟ್ 31, 1996 ಇಹ ತೊರೆದು ಪರದೆಡೆಗೆ ನಡೆದರು.
ಸಹಸ್ರಾರು ಜನರ ಜೀವನದಲ್ಲಿ ಬೆಳಕು ಮೂಡಿಸಿ, ಸಮಾಜದ ಒಳಿತಿಗಾಗಿಯೇ ತಮ್ಮ ಜೀವನವಿಡೀ ದುಡಿದು, ತಮ್ಮ ಜೀವನವನ್ನು ‘ಸಾರ್ಥಕ’ಗೊಳಿಸಿದ ಮಹಾಚೇತನ, ಅನಂತದಲ್ಲಿ ಲೀನವಾಯಿತು.
ಸ್ವಾಮಿಗಳು ಕಟ್ಟಿ ಬೆಳೆಸಿದ ಪ್ರೌಢಶಾಲೆಗಳು, ಮಕ್ಕಳ ವಸತಿ ಗೃಹಗಳು, ಬನಶಂಕರಿ ಅಮ್ಮನ ದೇವಸ್ಥಾನ, ಕಾಲೇಜುಗಳು, ದೈಹಿಕ ಶಿಕ್ಷಣ ಕಾಲೇಜು, ಆಯುರ್ವೇದ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು ಇಂದು ವಿಸ್ತೃತವಾಗಿ ಬೆಳೆದು ಉತ್ತಮ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.
ಶ್ರೀ ಬ್ರಹ್ಮಣ್ಯ ತೀರ್ಥರು
ಸಂಚಾರ ಮತ್ತು ಪವಾಡ
ಬ್ರಹ್ಮಣ್ಯ ತೀರ್ಥರು ಒಬ್ಬ ಅಪ್ರತಿಮ ಪಾಂಡಿತ್ಯದ ಘನಿ. ಮಧ್ವಮತದ ಪ್ರಚಾರಕ್ಕಾಗಿ ಆಸೇತು ಹಿಮಾಚಲದವರೆಗೂ ಸಂಚರಿಸಿ, ದುರ್ವಾದಿಗಳನ್ನು ಖಂಡಿಸುತ್ತಾ ಜಯಪ್ರತಗಳು ಮಾನ ಸನ್ಮಾನಗಳನ್ನು ಗಳಿಸಿಕೊಂಡು ಬ್ರಹ್ಮ ಜ್ಞಾನಿಗಳು. ತಮ್ಮ ಕಾಲದಲ್ಲಿ ಅಬ್ಬೂರು ಮತ್ತು ಚನ್ನಪಟ್ಟಣದ ಸುತ್ತಮುತ್ತಲಿನಲ್ಲಿ ಬೇಡಿ ಬಂದ ಆರ್ತರಿಗೆ ಆಹಾರ ಮತ್ತು ಆಶ್ರಯಗಳನ್ನು ಕೊಟ್ಟು ಅನೇಕ ಕೆರೆ ಅಗ್ರಹಾರಗಳು ನಿರ್ಮಿಸಿ ಸಮಾಜ ಸುಧಾರಣೆ ಗೈದ ಧೀಮಂತರು. ವಿಜಯನಗರ ಸಾಮ್ರಾಜ್ಯದ ಆರು ರಾಜರಿಗೆ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರು ಇವರ ಆಶ್ರಮ ಶಿಷ್ಯರು. ವ್ಯಾಸರಾಜರಂತಹ ಅಪ್ರತಿಮ ಜ್ಞಾನಿಗಳನ್ನು ನಾಡಿಗೆ ನೀಡಿದ ಕೀರ್ತಿ ಬ್ರಹ್ಮಣ್ಯ ಗುರುಗಳದು.
ಒಮ್ಮೆ ಸಂಚಾರ ಮಾಡುತ್ತಾ ಕೃಷ್ಣ ದೇವರಾಯನ ಆಳ್ವಿಕೆಯಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ಕೃಷ್ಣದೇವರಾಯನ ಪ್ರಾರ್ಥನೆಯಂತೆ ಆಗಮಿಸಿದಾಗ ಅಲ್ಲಿ ಜಲಕ್ಷಾವ, ಭೀಕರ ಬರಗಾಲ ಉಂಟಾಗಿತ್ತು. ಕೃಷ್ಣದೇವರಾಯ ಮತ್ತು ಅಲ್ಲಿನ ಜನರು ಬ್ರಹ್ಮಣ್ಯ ತೀರ್ಥರಲ್ಲಿ ತಮಗೆ ಬಂದೊದಗಿದ ಸಮಸ್ಯೆ ಪರಿಹರಿಸಬೇಕೆಂದು ಭಕ್ತಿಯಿಂದ ಪ್ರಾರ್ಥಿಸಿದಾಗ ಲೋಕ ಕಲ್ಯಾಣಕ್ಕಾಗಿ ತಮ್ಮ ಶಿಷ್ಯರಿಂದ ಪರ್ಜನ್ಯ ಹೋಮ ಮಾಡಿಸಿದರು. ಹೋಮ ನಡೆಯುತ್ತಿರುವಾಗಲೇ ಧಾರಾಕಾರವಾಗಿ ಮಳೆ ಸುರಿದ ಕೆರೆಗಳು ತುಂಬಿಕೊಂಡು ಜಲಕ್ಷಾಮ, ಬರಗಾಲ ನೀಗಿಸಿದರು ತಮ್ಮ ಅಗಾಧ ತಪಃಶಕ್ತಿಯಿಂದ. ಸಂತುಷ್ಟನಾದ ಕೃಷ್ಣದೇವರಾಯನು ಅನೇಕ ಗ್ರಾಮಗಳು ಉಂಬುಳಿಯಾಗಿ ಭಕ್ತಿಯಿಂದ ಬ್ರಹ್ಮಣ್ಯ ತೀರ್ಥರ ಮಠಕ್ಕೆ ಕೊಟ್ಟಿನು. ಅದರಲ್ಲಿ ಚನ್ನಪಟ್ಟಣದ ಹತ್ತಿರವಿರುವ ಬ್ರಹ್ಮಣ್ಯಪುರವು ಒಂದು.
ವೃಂದಾವನ ಪ್ರವೇಶ
ಇಂತಹ ಮಹಾಮಹಿಮರಾದ, ಸಮಾಜೋದ್ಧಾರಕರಾದ ಭಾಸ್ಕರ ಸಂಭೂತರಾದ ಶ್ರೀ ಬ್ರಹ್ಮಣ್ಯ ತೀರ್ಥರು ಸಾರ್ವಜಿತ್ ನಾಮ ಸಂವತ್ಸರದ ವೈಶಾಖ ಮಾಸದ ಕೃಷ್ಣಪಕ್ಷದ ಏಕಾದಶಿಯಂದು ೧೪೬೭ರಲ್ಲಿ ಅಬ್ಬೂರಿನ ಕಣ್ವ ನದಿ ತಟದಲ್ಲಿ ವೃಂದಾವನ ಪ್ರವೇಶ ಮಾಡಿದರು. ಇವರ ವೃಂದಾವನ ದರ್ಶನ, ಪ್ರದಕ್ಷಿಣೆ, ನಮಸ್ಕಾರ ಮಾತ್ರದಿಂದಲೇ ಅನೇಕ ರೋಗಗಳ ಪರಿಹಾರ ಮತ್ತು ಬೇಡಿ ಬಂದ ಭಕ್ತರಿಗೆ ಆರೋಗ್ಯ, ಐಶ್ವರ್ಯಾದಿಗಳು ಇಂದಿಗೂ ಒಂದಂಶದಿಂದ ವೃಂದಾವನದಲ್ಲಿ ನೆಲೆಸಿ ಅನುಗ್ರಹಿಸುತ್ತಿದ್ದಾರೆ. ವೃಂದಾವನದಲ್ಲಿ ಇದ್ದುಕೊಂಡೇ ಅನೇಕ ಕಾಯಿಲೆಗಳು ಪರಿಹರಿಸಿದ ದೃಷ್ಟಾಂತಗಳಿವೆ.

ಶ್ರೀ ಬ್ರಹ್ಮಣ್ಯ ತೀರ್ಥರ ಮೂಲ ಬೃಂದಾವನ ಅಬ್ಬೂರು.
ಕಲಿಯುಗದ ಕಲ್ಪವೃಕ್ಷ ಕಾಮಧೇನುಗಳಾದ, ಸೂರ್ಯಾಂಶ ಸಂಭೂತರಾದ, ಶ್ರೀ ವ್ಯಾಸರಾಯರ ಆಶ್ರಮದ ಗುರುಗಳಾದ ಈ ಅವತಾರ ಪುರುಷರು ಈ ದಿನ ( ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿ , ಕ್ರಿಸ್ತಶಕ 1467 ) ಬೃಂದಾವನ ಪ್ರವೇಶ ಮಾಡಿದ ಸುದಿನ.
ವೈಶಾಖ ಕೃಷ್ಣಪಕ್ಷೇಸಾವೇಕಾದಶ್ಯಾಂ ಗುರೂತ್ತಮ:
ನಭೋ ಮಧ್ಯಗತೇರ್ಯಮ್ಣಿ ಸ್ವರೂಪೇಲೀಯತ ಪ್ರಭು:
( ಶ್ರೀ ಬ್ರಹ್ಮಣ್ಯ ತೀರ್ಥ ವಿಜಯ:)
ಶ್ರೀ ಬ್ರಹ್ಮಣ್ಯತೀರ್ಥರು ಉಡುಪಿ ಪ್ರಾಂತ್ಯದ ತೋಟಂತಿಲ್ಲಾಯ ಮನೆತನದವರು ಎಂಬುದು ಘಟ್ಟದ ಮೇಲಿನ ಮಠಗಳಿಗೂ, ಉಡುಪಿ ಪ್ರಾಂತ್ಯಕ್ಕೂ ಇರುವ ಸಂಬಂಧದ ಬಗ್ಗೆ ಹೊಸ ಬೆಳಕನ್ನು ಚೆಲ್ಲುವ ಅಪೂರ್ವವಾದ ವಿಷಯ. ಜಗದ್ಗುರುಗಳಾದ ಶ್ರೀ ವ್ಯಾಸರಾಜಂತಹ ಯತಿವರೇಣ್ಯರನ್ನು ಜಗತ್ತಿಗೆ ನೀಡಿದ ಮಹಾಪ್ರಭುಗಳು ಶ್ರೀ ಬ್ರಹ್ಮಣ್ಯತೀರ್ಥರು.
ಜ್ಞಾನ ಮಂಟಪ ಕ್ಷೇತ್ರವಾದ ಅಬ್ಬೂರಿನಲ್ಲಿ ಇಂದಿಗೂ ತಮ್ಮ ವೃಂದಾವನದ ಒಳಗೆ ಇದ್ದುಕೊಂಡು ಭಕ್ತರ ಸಕಲಾಭಿಷ್ಠ ಗಳನ್ನು ಈಡೇರಿಸುವ ಕಲ್ಪವೃಕ್ಷ ಕಾಮಧೇನು, ನೊಂದವರನ್ನು ಕರುಣಾ ಮೃತಲೋಚನದಿಂದ ಸಂತೈಸುವ ಕೃಪಾಪೂರ್ಣರು, ಪುಣ್ಯ ಚರಿತರು, ಸತ್ತವರನ್ನು ಬದುಕಿಸಬಲ್ಲ ಅಸಾಧಾರಣ ಮಹಿಮೆಯ ಅಮೃತ ಹಸ್ತರು, ಇವರ ಸ್ಮರಣೆ, ನಾಮೋಚ್ಚಾರಣೆ, ಗುಣ ಕೀರ್ತನೆ, ಚರಿತ್ರೆ ಚಿಂತನೆ ಮೊದಲಾದುವುಗಳು ಸಹ ಭಕ್ತಜನರ ಉದ್ಧಾರ ಸಾಧನ.
ಬ್ರಾಹ್ಮಣರು ಮಾತ್ರವಲ್ಲದೆ, ಎಲ್ಲ ಪಂಗಡದ ಜನರು ಶ್ರೀ ಬ್ರಹ್ಮಣ್ಯತೀರ್ಥರ ಬೃಂದಾವನ ಸೇವೆಯನ್ನು ಯಥೋಚಿತವಾಗಿ ಮಾಡಿ ಇಷ್ಟಾರ್ಥಗಳನ್ನು ಪಡೆಯುತ್ತಿರುವರು. ದನಕರುಗಳ ವ್ಯಾಧಿಗಳನ್ನು ಸಹ ಈ ಬೃಂದಾವನ ಸೇವೆಯಿಂದ ಪರಿಹರಿಸಿಕೊಳ್ಳುವ ಭಕ್ತರೂ ಆ ಪ್ರಾಂತ್ಯದಲ್ಲಿ ಕಂಡುಬರುವರು.
ಇಂತಹ ಮಹಾನ್ ಯತಿವರೇಣ್ಯರ ನಾಮಸ್ಮರಣೆಯಿಂದ, ಬೃಂದಾವನ ಸೇವೆಯಿಂದ, ಮೃತ್ತಿಕಾ ಧಾರಣೆಯಿಂದ, ಎಲ್ಲಾ ಕಠಿಣ ತರದ ವ್ಯಾಧಿಗಳೂ ಗುಣವಾಗುವುದು, ಭೂತ ಪ್ರೇತಾದಿ ಪೀಡೆಗಳು ನಾಶವಾಗುವುದು, ಎಂಬುದನ್ನು ಸ್ವತಃ ಶಿಷ್ಯರಾದ ಶ್ರೀ ವ್ಯಾಸರಾಯರು ತಮ್ಮ " ಶ್ರೀ ಬ್ರಹ್ಮಣ್ಯ ತೀರ್ಥ ಪಂಚರತ್ನ ಮಾಲಿಕ ಸ್ತೋತ್ರಂ " ವಿಶೇಷ ಕೃತಿಯಲ್ಲಿ ತಮ್ಮ ಗುರುಗಳನ್ನು ವಿಶೇಷವಾದ ರೀತಿಯಲ್ಲಿ ಬಣ್ಣಿಸಿದ್ದಾರೆ ಅಲ್ಲದೆ ಈ ಸ್ತೋತ್ರವು ನಿತ್ಯ ಪಠನೀಯವೂ ಆಗಿದೆ. ಶ್ರೀ ವ್ಯಾಸರಾಜರ ಆಶ್ರಮದ ಶಿಷ್ಯರಾದ ಶ್ರೀ ಶ್ರೀನಿವಾಸ ತೀರ್ಥರು ಅನೇಕ ಕೃತಿಗಳಲ್ಲಿ ಬ್ರಹ್ಮಣ್ಯತೀರ್ಥರ ಮಹಿಮೆಗಳನ್ನು ಕೊಂಡಾಡಿದ್ದಾರೆ.
ಇಂತಹಾ ಶ್ರೀ ಅಬ್ಬೂರು ಕ್ಷೇತ್ರವು ಸಕಲ ಮಾಧ್ವರಿಗೆ ಸಕಲ ಆಸ್ತಿಕರಿಗೆ ಅತ್ಯಂತ ಪಾವನವಾದ ಕ್ಷೇತ್ರವಾಗಿದೆ.
ಶ್ರೀ ಗುರು ಪರಪ್ಪ ಸ್ವಾಮಿ ಮಠ.ಶ್ರೀರಾಂಪುರ, ಹೊಸದುರ್ಗ ತಾಲ್ಲೋಕ್, ಚಿತ್ರದುರ್ಗ ಜಿಲ್ಲೆ.
ಉತ್ತರ ಕರ್ನಾಟಕದ ಸ್ಥಳೀಯ ಗುರೂಜಿ 18 ನೇ ಶತಮಾನದ ಅಂತ್ಯದಲ್ಲಿ ಚಿತ್ರದುರ್ಗ ಜಿಲ್ಲೆಯ ಕಡೆಗೆ ಬಂದರು.
ಸ್ವಭಾವತಃ ಅವರು ಗುರು ಅಲ್ಲ ಆದರೆ ಕೇಳಿದ ವ್ಯಕ್ತಿಗಳಿಗೆ ಸಲಹೆಗಳನ್ನು ನೀಡುತ್ತಾರೆ. ಅವರು ಜೀವಿತಾವಧಿಯಲ್ಲಿ ಅನೇಕ ಜನರು ಆತನನ್ನು ಜೀವಂತ ದೇವರು ಎಂದು ಪೂಜಿಸಿದರು.
ಇವತ್ತು ನಾವು ಅವರ ದೈವಿಕ ಉಪಸ್ಥಿತಿಯನ್ನು ಕಂಡುಕೊಳ್ಳುತ್ತೇವೆ ಮತ್ತು ಭಕ್ತರಿಗೆ ಅವರ ತೊಂದರೆಗಳನ್ನು ಎದುರಿಸಲು ಸಹಾಯ ಮಾಡುತ್ತಿದ್ದಾರೆ ಎಂಬ ನಂಬಿಕೆ ಇದೆ,
ಇಲ್ಲಿ ವಾರ್ಷಿಕ ರಥೋತ್ಸವ ಬಲು ವಿಜೃಂಭಣೆಯಿಂದ ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತದೆ.
May 6, 2019
ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು,
ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು. ಶ್ರೀ ವೀರೇಶ್ವರ ಸ್ವಾಮಿಗಳು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗಳಗಿ ಗ್ರಾಮದವರು ಹಾಗೂ ಇಂಗಳಗಿ ಮಠಪತಿ ...
-
Sri Sri Shankarabhagawan Maharaj's aradhana was accomplished on 14-2-2017 at Tippapura. He was the one who blessed Bhagawan(APPA). S...
-
CUDDAPAH SRI PARAMAHAMSA SACHIDANANDA YOGEESHWAR MATHALAYAM TRUST (R) Kempapura Agrahara, Bhuvaneshwari Nagar, Bangalore 560023, Karn...
-
SRI SHANKARALINGA BHAGAVAN ಅವಧೂತ,ಪರಮ ಪೂಜ್ಯ ಶಂಕರಲಿಂಗ ಭಗವಾನರ Mailing Address Address: Shri Ranganathashrama Kommaranaha...

















































